ತಿಪ್ಪೆ ಪೂಜೆ ಅಂದ್ರೆ ನಕ್ಕು ಬಿಡುವುದಲ್ಲಾ. ಎಂದಾದರೂ ತಿಪ್ಪೆ ಪೂಜೆ ಮಾಡಿದ್ದು ಇದೆಯಾ ಅಂತ ಇಂದಿನ ಪೀಳಿಗೆ ಮಂದಿ ಕೇಳುತ್ತಾರೆ. ಆದ್ರೆ ನಮ್ಮ ಹಿರಿಯರು ತಿಪ್ಪೆ ಪೂಜೆ ಗೆ ಎಷ್ಟೊಂದು ಮಹತ್ವ ನೀಡಿದ್ದರು.  ಈಗ ಸುಧಾರಿತ ತಿಪ್ಪೆಗೊಬ್ಬರ ತಯಾರಿಸುವುದು ಹೇಗೆ ಗೊತ್ತಾ.?

ನಮ್ಮದು ಕೃಷಿ ಪ್ರಧಾನವಾದ ದೇಶ. ಭೂಮಿ ಫಲವತ್ತತೆಯಿಂದ ಕೂಡಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ನಮ್ಮ ಹಿರಿಯರು ಭೂಮಿ ಫಲವತ್ತತೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ದನಕ್ಕಿಯನ್ನು ಕಟ್ಟಿ ಅಲ್ಲಿಯೇ ರಾಸುಗಳನ್ನು ಸಾಕುತ್ತಿದ್ದರು.

ರೈತ ಬೆಳಗಿನ ಜಾವ ಎದ್ದೇಳುತ್ತಿದ್ದಂತೆ  ರಾಸುಗಳು ಹಾಕಿದ ಸಗಣಿ – ಗಂಜಳವನ್ನು ಪುಟ್ಟಿಯಲ್ಲಿ ಪುಟ್ಟಿಯಲ್ಲಿ ಹೊತ್ತುಕೊಂಡು ತಿಪ್ಪೆಗೆ ಹಾಕುತ್ತಿದ್ದರು. ಬಿತ್ತುವ ಸಮಯದಲ್ಲಿ ತಿಪ್ಪೆಗೆ ಪೂಜೆ ಮಾಡಿ ಆ ನಂತರ ಭೂಮಿಗೆ ಗೊಬ್ಬರವನ್ನು ಹಾಕುತ್ತಿದ್ದರು ನಂತರ ತಿಪ್ಪೆ ಗೊಬ್ಬರವಾಗುತಿತ್ತು. ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ  ಬೆಳೆ ಚೆನ್ನಗಿ ಬರುತಿತ್ತು. ಹಿರಿಯರು ಆರೋಗ್ಯವಾಗಿದ್ದರು.

ಆದ್ರೆ ಕಾಲ ಬದಲಾಯಿತು ಮನೆಯೊಳಗೆ ಇದ್ದ ದಕ್ಕಿ ಮಯವಾದವು. ರಾಸುಗಳನ್ನು ಬಿದಿ ಬದಿಯಲ್ಲಿ ಕಟ್ಟಿಹಾಕಿ ಸಾಕುವ ಕಾಲ ಬಂದಾಯಿತು. ಅಲ್ಲಪ್ಪ ಸಗಣಿಯನ್ನು ಬಿಸಿಲಿನಲ್ಲಿ ಬೆಯುವಂತ್ತಾಯಿತು. ಭೂಮಿಗೆ ರಾಸಾಯನಿಕ ಗೊಬ್ಬರಕ್ಕೆ ಮಾರುಹೋದರು ರೈತರು.

ಆದ್ರೆ ಇರುವ ಸಗಣಿಯನ್ನು ಸುಧಾರಿತ ತಿಪ್ಪೆ ಗೊಬ್ಬರ ಮಾಡುವುದು ಹೇಗೆ. ನಮ್ಮ ಭೂಮಿಯ ಫಲವತತ್ತೆಯನ್ನು ಹೆಚ್ಚಿಸುವುದು ಹೇಗೆ ಎಂಬುದರ ಬಗ್ಗೆ ಕೆಲ ರೈತ ವಿಜ್ಞಾನಿಗಳು ಪ್ರಯೋಗ ಮಾಡಿದ್ದಾರೆ.

ನಿಮ್ಮ ಸುತ್ತಲು ಸಿಗುವ ಹಸಿರೆಲೆ ಯಾವ ಗಿಡದಾಗಲಿ ಮರದಾಗಲಿ ಹಸಿರೆಲೆ ಇರಬೇಕು. ಜೊತೆಗೆ ಒಣಗಿದ ಕಸ ಕಡ್ಡಿ ಮತ್ತು ಸಗಣಿ ಗಂಜಲ, ಗೋಡು ಮಣ್ಣು ಇದ್ದರೆ ಸಾಕು ಸುಧಾರಿತ ತಿಪ್ಪೆ ಗೊಬ್ಬರ ತಯಾರು ಮಾಡಿಕೊಳ್ಳ ಬಹುದು.

ಮಾಡುವ ವಿಧಾನ:

ನೆರಳು ಹಾಗೂ ಸ್ವಲ್ಪ ಬಿಸಲು ಬೀಳುವ ಜಾಗ ಮತ್ತು ಮಳೆ ಬಂದರೆ ಮಳೆ ನೀರು ಹರಿದು ಹೋಗುವಂತ ಜಾಗವನ್ನು ಆರಸಿಕೊಳ್ಳ ಬೇಕು. 3 ರಿಂದ 4 ಅಡಿ ಅಗಲ, ಉದ್ದ ಎಷ್ಟು ಬೇಕಾದರು ಇರಬಹುದು.  ಮೊದಲಿಗೆ ಸ್ವಲ್ಪ ಎತ್ತರಕ್ಕೆ ಮಣ್ಣು ಗುಡ್ಡೆ ಮಾಡಿ. ಅದರ ಮೇಲೆ ಸಗಣಿ ಮತ್ತು ಗಂಜಲವನ್ನು ಚೆಲ್ಲಿ. ಅದರ ಮೇಲೆ ಹಸಿರೆಲೆಯ ಗಿಡ ಗಂಡಿಗಳನ್ನು ಹರಡಿ. ಮತ್ತೆ ಮಣ್ಣು ಹಾಕಿ ಸಹಣಿ ಗಂಜಲ ಹರಡಿ. ಮತ್ತೆ ಒಣ ಕಸ ಕಡ್ಡಿ ಹರಡಿ ಮತ್ತೆ ಸಗಣಿ ಗಂಜಲ ಹಾಕಿ ಇದರಂತೆ ಒಂದರ ಮೇಲೊಂದರೆಂತೆ ಪದರಗಳನ್ನು ಹಾಕಿ ನಂತರ ಗೋಡು ಮಣ್ಣಿನಿಂದ ಮುಚ್ಚಿದ ನಂತರ ಮೇಲೆ ಗೋಡು ಮಣ್ಣಿನಿಂದ ಪ್ಯಾಕ್ ಮಾಡಿ. ಸುತ್ತಲೂ ಪ್ಯಾಕ್ ಮಾಡಿದ ಮೇಲೆ  ಹಾರೆ ಯಿಂದ 2 ರಿಂದ 3 ಕಡೆ ಹಾರೆಯಿಂದ ಮೇಲೆ ತುತು ಮಾಡಿ ಆ ತುತುಗೆ ನೀರನ್ನು ಹಾಕಿ. ಹೀಗೆ 15 ದಿನಕೊಮ್ಮೆ ನೀರುಹಾಕಿ.

ಮೂರು ತಿಂಗಳ ನಂತರ ಸುವಾಸನೆ ಬೀರುವಂತ ವಾಸನೆ ಬರುತ್ತದೆ. ಸ್ವಲ್ಪ ಪ್ಯಾಕ್ ಮಾಡಿದ ಮಣ್ಣನ್ನು ಬಗೆದರೆ ಕಪ್ಪಗೆ ಕಾಣಿಸುತ್ತದೆ ಆಗ ಸುಧಾರಿತ ಗೊಬ್ಬರ ತಯಾರಾಗುತ್ತದೆ. ಭೂಮಿಗೆ ಹಾಕಿದರೆ ಒಳ್ಳೆಯ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ