ಚಿತ್ರದುರ್ಗ: ಶೂನ್ಯ ಬಂಡಾವಳದ ನೈಸರ್ಗಿಕ ಕೃಷಿ ಕಾರ್ಯಗಾರವನ್ನು ಜನವರಿ 7 ರಿ೦ದ 11 ರವರೆಗೆ ಮುರುಘಾವನದ ಅನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಸಾವಯವ ಕೃಷಿಕರಾದ ಅವಿನಾಶ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜನಾಂದೋಲನಗಳ ಮಹಾಮೈತ್ರಿಯ ಭಾಗವಾಗಿ ಉಳುಮೆ ಪ್ರತಿಷ್ಠಾನ, ಅಮೃತ ಭೂಮಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಕಾರ್ಯಗಾರವನ್ನು ಸುಭಾಷ್ ಪಾಳೇಕರ್‌ರವರು ನಡೆಸಿಕೊಡಲಿದ್ದಾರೆ.
ಇತ್ತೀಚಿನ ದಿನದಲ್ಲಿ ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಹಾಕುವುದರ ಮೂಲಕ ಫಲವತ್ತಾದ ಭೂಮಿಯನ್ನು ಬಂಜರು ಮಾಡಲಾಗುತ್ತಿದೆ ಇದರಿಂದ ಬೆಳೆಯುವ ಬೆಳೆಯೂ ಸಹಾ ರಾಸಾಯನಿಕ ಬೆಳೆಯಾಗಿದ್ದು, ಇದನ್ನು ಸೇವಿಸುವ ಜನತೆಯೂ ಸಹಾ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಇದರಿಂದ ಸಾವಯವ ಕೃಷಿಯನ್ನು ಮಾಡುವುದರಿಂದ ಉತ್ತಮವಾದ ಆಹಾರ ಸೇವನೆಯ ಜೊತೆಗೆ ಭೂಮಿಯೂ ಸಹಾ ಫಲವತ್ತತೆಯಿಂದ ಇರುತ್ತದೆ ಎಂದು ತಿಳಿಸಿದರು.
ಸುಭಾಷ ಪಾಳೆಕಾರ್ ರವರ ಪದ್ದತಿಯಂತೆ ಕೃಷಿಯನ್ನು ಮಾಡುವುದರಿಂದ ಯಾವುದೇ ರೀತಿಯ ಅರ್ಥಿಕ ಹೊರೆಯನ್ನು ಕಾಣಲು ಸಾಧ್ಯವಿಲ್ಲ, ಹೊಲದಲ್ಲಿ ಒಂದು ಜೊತೆಯಲ್ಲಿ ಮತ್ತೋಂದು ಬೆಳೆಯನ್ನು ಹಾಕುವುದರ ಮೂಲಕ ಒಂದು ಬೆಳೆಯ ಬೆಲೆ ಇಲ್ಲದಿದ್ದರೆ ಮತ್ತೋಂದು ಬೆಳೆಯಲ್ಲಿ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ ಇದರ ಬಗ್ಗೆ ಜನತೆಗೆ ಸರಿಯಾದ ರೀತಿಯಲ್ಲಿ ತಿಳಿಸುವ ಸಲುವಾಗಿ ಈ ಬಾರಿ ೫ ದಿನಗಳ ಕಾಲ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಮುಂದಿನ ಎರಡು ದಿನ ಸಾವಯವ ಬೆಳೆಯ ಬಗ್ಗೆ ತಿಳಿಸಲಾಗುವುದು ಮುಂದಿನ ಮೂರು ದಿನ ಜಿಲ್ಲೆಯ ಭೂಮಿ, ಮಳೆಗೆ ಸಂಬಂಧಪಟ್ಟಂತೆ ರೈತರ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗುವುದು ಎಂದರು.
ನಮ್ಮ ಹೊಲದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿಯನ್ನು ಅನುಸರಿಸಲಾಗುತ್ತಿದೆ ಇದೇ ರೀತಿ ರಾಜ್ಯದ ವಿವಿಧೆಡೆಗಳಲ್ಲಿಯೂ ಸಹಾ ಸಾವಯವ ಕೃಷಿಯ ಬಗ್ಗೆ ತಿಳಿಸಲಾಗುತ್ತಿದೆ, ಮುಂದಿನ ದಿನದಲ್ಲಿ ಜಿಲ್ಲೆಗೆ ಒಂದರಂತೆ ಸಾವಯವ ಕೃಷಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ನೀಡುವ ಕೇಂದ್ರಗಳಲ್ಲಿ ರೈತ ಸಂಘದ ಸಹಕಾರದೊಂದಿಗೆ ಸ್ಥಾಪನೆ ಮಾಡುವ ಆಲೋಚಬೆ ಇದೆ ಎಂದು ಅವಿನಾಶ ತಿಳಿಸಿದರು.
ಜಾಗತಿಕ ತಾಪಮಾನದ ಬಗ್ಗೆ ನಾವೆಲ್ಲರೂ ಮಾತನಾಡುತ್ತಿದ್ದೇವೆ. ನಮ್ಮ ದೇಶದಲ್ಲಿ ೨.೫ ಬಿಲಿಯನ್ ಟನ್ಸ್ ಆಫ್ ಕಾರ್ಬನ್ ಉತ್ಪತ್ತಿಯಾಗುತ್ತಿದೆ. ಪ್ರಪಂಚದಲ್ಲಿ ೪ನೇ ಸ್ಥಾನದಲ್ಲಿದ್ದೆವೆ. ಎಷ್ಟು ಅದ್ಬುತ ಎಂದರೆ ಒಂದು ಮರಕ್ಕೆ ಒಂದು ವರ್ಷಕ್ಕೆ ೨೦ಕೆ.ಜಿ ಕಾರ್ಬನ್‌ನನ್ನು ಹಿಡಿದಿಟ್ಟುಕೊಳ್ಳಬಹುದಾದ ಶಕ್ತಿಯಿದೆ. ಇದನ್ನು ನಾವು ಸಿ.ಎನ್ ಅನುಪಾತವನ್ನು ಕಾಪಾಡಿದ್ದೆ ಅದಲ್ಲಿ ಮತ್ತೆ ನಮ್ಮ ವಾತಾವರಣಕ್ಕೆ ಹಿಂತಿರುಗುವುದಿಲ್ಲ. ಈ ಲೆಕ್ಕದಲ್ಲಿ ನೋಡುವುದಾದರೆ ನಮ್ಮ ಭಾರತದಲ್ಲಿ ಅಂದಾಜು ೩೩ ಬಿಲಿಯನ್ ಮರಗಳಿವೆ ಒಂದು ಮಾಹಿತಿಯ ಪ್ರಕಾರ ಅಂದಾಜು ೯೫ ಬಿಲಿಯನ್ ಮರಗಳನ್ನು ನಾವು ಬೆಳೆಸಿದ್ದೆ ಆದಲ್ಲಿ ೨೦೫೦ರೊಳಗೆ ಬಹುಶಃ ಜಾಗತೀಕ ತಾಪಮಾನವನ್ನು ಸಮಸ್ಥಿತಿಗೆ ತರಬಹುದು. ಇದಕ್ಕೆ ನಮ್ಮಲ್ಲಿ ಲಭ್ಯವಿರುವ ವ್ಯವಸಾಯ ಭೂಮಿಯೇ ಸಾಕು. ಲಭ್ಯವಿರುವ ಭೂಮಿಯಲ್ಲಿಯೇ ನಾವು ಹೆಚ್ಚು ಮರಗಳನ್ನು ಬೆಳೆಸುವುದಾದರೆ, ನೈಸರ್ಗಿಕ ಕೃಷಿ ಬಹಳ ಮುಖ್ಯ ಅನಿಸುತ್ತದೆ. ಯಾಕೆಂದರೆ ಈ ಪದ್ಧತಿಯಲ್ಲಿ ಒಂದು ಎಕರೆಗೆ ೧೫೦೦ ರಿಂದ ೧೮೦೦ ಗಿಡಗಳನ್ನು ಆಯೋಜಿಸಲಾಗುತ್ತದೆ. ೨೦ ರಿಂದ ೩೦ ಜಾತಿಯ ಸಸ್ಯಗಳು, ಇದರಿಂದ ಜಾಗತಿಕ ತಾಪಮಾನ ಕಡಿಮೆಯಾಗುವುದರ ಜೊತೆಗೆ ಒಂದು ಬೆಳೆಗೆ ಸರಿಯಾದ ಬೆಳೆ ಸಿಗದೆ ಹೋದರು ಇನ್ನೊಂದು ಬೆಳೆಯಿಂದ ಜೀವನ ಸಾಗಿಸಬಹುದು ಎಂದು ಅವಿನಾಶ್ ತಿಳಿಸಿದರು.

ನೈಸರ್ಗಿಕ ಕೃಷಿಯಲ್ಲಿ ಬಹಳ ಮುಖ್ಯವಾಗಿ ಗಮನಹರಿಸುವ ಅಂಶವೆಂದರೆ ರೈತರು ಯಾರನ್ನು ಯಾವುದನ್ನು ಅವಲಂಭಿಸದೆ ನಮ್ಮಲ್ಲಿರುವ ಸಂಪನ್ಮೂಲಗಳನ್ನೆ ಬಳಸಿ ಪ್ರತಿಯೊಬ್ಬ ನಾಗರಿಕನ ಅವಶ್ಯಕತೆಗೆ ತಕ್ಕಂತೆ ಆಹಾರ ಪೂರೈಸಿ ಆರ್ಥಿಕವಾಗಿ, ಮಾನಸಿಕವಾಗಿ ಸದೃಢರಾಗಿ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಿ ಬದುಕುವಂತೆ ಮಾಡುವುದು.ನೈಸರ್ಗಿಕ ಕೃಷಿಯ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕಾರ್ಯಗಾರಕ್ಕೆ ಹಾಜರಿಯಾಗುವಂತೆ ಮನವಿ ಮಾಡಿದ್ದು, ಹೆಚ್ಚಿನ ಮಾಹಿತಿಯನ್ನು ತಿಳಿಯಲು ಮೊ:9448820483 ಸಂರ್ಪಕಿಸಲು ಕೋರಿದ್ದಾರೆ. ಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ನುಲೇನೂರು ಶಂಕ್ರಪ್ಪ ಉಪಸ್ತಿತರಿದ್ದರು.