ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿಭಾಗ್ಯ ಯೋಜನೆಯಡಿ ಈಗಾಗಲೇ 5105 ಕೃಷಿಹೊಂಡ ನಿರ್ಮಿಸಲಾಗಿದೆ. ಹೊಂಡಗಳಿಗೆ ಸಂಗ್ರಹಣೆಯಾಗುವ ನೀರನ್ನು ಬೆಳೆಯ ಸಂದಿಗ್ದ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ನೀರಾವರಿಗೆ ಉಪಯೋಗಿಸಿಕೊಳ್ಳಲು ಅನುವಾಗುವಂತೆ ಇಂಗಿ ಹೋಗುವುದನ್ನು ತಡೆಗಟ್ಟಲು ಹೊಂಡಗಳಿಗೆ HDPE 300 Micron geomembrance  ಪಾಲಿಥೀನ್ ಲೈನಿಂಗ್ ಹಾಗೂ ಇತರ ಘಟಕಗಳನ್ನು ಪ್ಯಾಕೇಜ್ ಮುಖಾಂತರ ನೀಡಲಾಗಿದೆ.
2017-18 ನೇ ಸಾಲಿನಲ್ಲಿ ಈಗಾಗಲೇ ನಿರ್ಮಿಸಲಾಗದ ಕೃಷಿಹೊಂಡಗಳಲ್ಲಿ ಮಳೆಯ ನೀರಿನಿಂದ ಕೃಷಿ ಹೊಂಡಗಳಲ್ಲಿ ನೀರು ಶೇಖರಣೆಯಾಗಿದ್ದು, ನೀರು ಆವಿಯಾಗದಂತೆ ತಡೆಯುವುದು ಮತ್ತು ಆಕಸ್ಮಿಕವಾಗಿ ಜನರು ಹಾಗೂ ಜಾನುವಾರುಗಳು ಬಿದ್ದು ಪ್ರಾಣಹಾನಿಯಾಗುವುದನ್ನು ತಡೆಗಟ್ಟಲು ಕೃಷಿಹೊಂಡಗಳಿಗೆ ನೆರಳು ಪರದೆಯನ್ನು ಅಳವಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಜಿಲ್ಲೆಯಲ್ಲಿ ಎಲ್ಲ 6 ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಬಹುತೇಕ ಕೃಷಿಹೊಂಡಗಳು ಭರ್ತಿಯಾಗಿವೆ. ಆದ್ದರಿಂದ ನೆರಳು ಪರದೆ ಅಳವಡಿಸುವ ಅವಶ್ಯಕ್ತೆಯಿದೆ.
ಕೃಷಿಹೊಂಡಗಳಿಗೆ ಸಪೋರ್ಟಿಂಗ್ ಸ್ಟೋನ್ ಆಗಿರುವ ISI6008:2012, 100GSM   ನೆರಳುಪರದೆಯನ್ನು ಅಳವಡಿಸಿಕೊಂಡು ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಸಹಾಯಧನ ರೈತರ ಖಾತೆಗೆ ಪಾವತಿಸಲಾಗುವುದು.
ಮಾರ್ಗಸೂಚಿ: ನಿಗದಿಪಡಿಸಿರುವ ನಿರ್ಧಿಷ್ಟನೆಗಳನ್ನು ಹೊಂದಿರುವ ನೆರಳುಪರದೆಯನ್ನು ರೈತರು ಮಾರುಕಟ್ಟೆಯಲ್ಲಿ ಖರೀದಿಸಿ ನಿಗದಿತ ರೀತಿಯಲ್ಲಿ ಕೃಷಿಹೊಂಡದ ಸುತ್ತಲೂ ನೆರಳುಪರದೆ ಅಳವಡಿಸುವುದು, ಸಮೀಪದ ರೈತಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರ ಕ್ಷೇತ್ರಕ್ಕೆ ಭೇಟಿನೀಡಿ ಪರಶೀಲಿಸಿ ಗುಣಮಟ್ಟ ಖಾತರಿಪಡಿಸಿಕೊಂಡು, ಪೂರ್ಣಗೊಳಿಸಿರುವ ಫೋಟೋ ದಾಖಲೀಕರಣ ಮಾಡಿ ದೃಢೀಕರಣ ನೀಡುವರು. ನಂತರ ಅಳತೆಗನುಗುಣವಾಗಿ ಶೇ.50 ಸಹಾಯಧನ ಪಾವತಿಸಲಾಗುವುದು. ವಿವರ ಇಂತಿದೆ
ಕೃಷಿ ಹೊಂಡದ ಅಳತೆ 10x10x3 ಗೆ ಸಹಾಯಧನ ರೂ.6232/-, 12x12x3 ಗೆ ಸಹಾಯಧನ ರೂ.7352/-, 15x15x3 ಗೆ ಸಹಾಯಧನ ರೂ.10537/-, 18x18x3 ಗೆ ಸಹಾಯಧನ ರೂ.12820/, 21x21x3 ಗೆ ಸಹಾಯಧನ ರೂ.16725/- ಆಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ಚಿತ್ರದುರ್ಗ ಜಂಟಿ ಕೃಷಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.