(ಮಣ್ಣು ಮಾತನಾಡುತ್ತೆದೆ ಎಂಬುದರ ಮುಂದುವರೆದ ಭಾಗ-2)
ಸಸ್ಯ ಅಥವಾ ಪ್ರಾಣಿ ಮೂಲದ ಸಾವಯವ ವಸ್ತುಗಳನ್ನು ಉತ್ಕೃಷ್ಟ ಮಟ್ಟದಲ್ಲಿ ಗೊಬ್ಬರವನ್ನಾಗಿ ಬದಲಾಯಿಸುವುದೇ ಕಾಂಪೋಸ್ಟ್.
ಜೈವಿಕ ಕ್ರಿಯೆಗಳ ಮೂಲಕ ಸಾವಯವ ಉಳಿಕೆಗಳನ್ನು ನೆಲಮಣ್ಣಾಗಿ ಅಥವಾ ಹ್ಯೂಮಸ್[ಊumus] ಆಗಿ     ಪರಿವರ್ತನೆಗೊಳಿಸುವ ಪ್ರಕ್ರಿಯೆಯೇ ಕಾಂಪೋಸ್ಟ್
ವಿವಿಧ ಬಗೆಯ ಹಾಗೂ ವಿವಿಧ ಪ್ರಮಾಣದ ಸಾವಯವ ವಸ್ತುಗಳನ್ನು  ಜೊತೆಯಾಗಿ ಕೊಳೆಯಿಸಿ, ಕಳಿಯಿಸಿ ಒಂದು ಸಮರೂಪದ ಹಾಗೂ ಸದೃಢವಾದ ಗೊಬ್ಬರವನ್ನಾಗಿ ಪರಿವರ್ತಿಸುವ ಕಲೆ ಮತ್ತು ವಿಜ್ಜಾನವೇ ಕಾಂಪೋಸ್ಟ್.

[ಗಮನಿಸಿ: ಮಣ್ಣಲ್ಲಿ ಚೆನ್ನಾಗಿ ಕಳಿತ ಸಾವಯವ ಅಂಶವೇ ಹ್ಯೂಮಸ್.  ಆದರೆ ಇದು ಮಣ್ಣಲ್ಲಿರುವ ಸೂಕ್ಷ್ಮಾಣುಜೀವಿಗಳಿಗೆ ಆಹಾರವಲ್ಲ. ಆದರೆ ಗಾತ್ರದಲ್ಲಿ ಅತೀ ಸಣ್ಣವಾಗಿರುವ ಇದರಲ್ಲಿನ ರಾಸಾಯನಿಕ ಗುಣಗಳಿಂದಾಗಿಯೇ ಮಣ್ಣಿಗೆ ಇದು ಬಹಳ ಪ್ರಮುಖವಾಗಿದೆ. ಇದು ಅತ್ಯಗತ್ಯ ಖನಿಜಾಂಶಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಜೊತೆಗೆ ಮಣ್ಣಲ್ಲಿ ನೀರನ್ನು ಹಡಿದಿಡುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಹಾಗೂ ಮಣ್ಣಿನ ರಚನೆಯನ್ನು ಉತ್ತಮಗೊಳಿಸುತ್ತz].

೧.     ಕಾಂಪೋಸ್ಟ್ ಏಕೆ ಬೇಕು ?

–    ಕಾಂಪೋಸ್ಟ್ ಸಾವಯವ ತ್ಯಾಜ್ಯ ವಸ್ತುಗಳನ್ನು ಪುನರ್ ಬಳಸಲು ಅನುವು ಮಾಡಿಕೊಡುವ ಅತ್ಯುತ್ತಮ ವಿಧಾನ
–    ಮಣ್ಣಿನ ರಚನೆಯನ್ನು ನಿರ್ಮಿಸುತ್ತದೆ
–    ಮಣ್ಣಿನ ಕಣಕಣಗನ್ನು ಒಟ್ಟುಗೂಡಿಸುತ್ತದೆ
–    ತೇವಾಂಶವನ್ನು ಹಿಡಿದಿಡುತ್ತದೆ
–    ಮಣ್ಣಿನ ಸವಕಳಿಯನ್ನು ತಡೆಯುತ್ತದೆ
–    ಮಣ್ಣಲ್ಲಿ ಗಾಳಿಯಾಡುವುದನ್ನು ಸುಧಾರಿಸುತ್ತದೆ
–    ಗಿಡಗಳಿಗೆ ಅಗತ್ಯವಾದಾಗ ಪೋಷಕಾಂಶಗಳನ್ನು ಒದಗಿಸುತ್ತದೆ
–    ಮಣ್ಣಿಗೆ ಗುಣಾತ್ಮಕ ಅಂಶಗಳನ್ನು ಒದಗಿಸುತ್ತದೆ
–    ಮಣ್ಣಿಗೆ ಖನಿಜಾಂಶಗಳನ್ನು ಒದಗಿಸುತ್ತದೆ
–    ಮಣ್ಣಲ್ಲಿರುವ ವಿಷಕಾರಿ ಅಂಶಗಳನ್ನು ನಿಷ್ಪರಿಣಾಮಗೊಳಿಸುತ್ತದೆ
–    ಆಮ್ಲೀಯ ಅಥವಾ ಕ್ಷಾರೀಯ ಮಣ್ಣಿನ ರಸಸಾರವನ್ನು  (ಠಿಊ)  ಸುಧಾರಿಸುತ್ತದೆ
–    ಸೂಕ್ಷ್ಮಾಣುಜೀವಿಗಳನ್ನು ಆಕರ್ಷಿಸುತ್ತದೆ
–    ಗಿಡಗಳ ಬೆಳವಣಿಗೆಯನ್ನು ವರ್ಧಿಸುತ್ತದೆ
[ಗಮನಿಸಿ: ಮಣ್ಣಿನ ಕಣಕಣಗನ್ನು ಒಂದುಗೂಡಿಸುವುದು ಎಂದರೆ ಮಣ್ಣಲ್ಲಿರುವ ಅನೇಕ ಬೂಷ್ಟುಕಾರಕ ಜೀವಿಗಳು ಸಾವಯವ ವಸ್ತುಗಳ ಮೇಲೆ ಮೂಡುತ್ತವೆ. ಮಣ್ಣಲ್ಲಿರುವ ಬ್ಯಾಕ್ಟೀರಿಯಾ ಜೀವಿಗಳು ಈ ಬೂಷ್ಟುಕಾರಕ ಜೀವಿಗಳನ್ನು ಅಂಟು ಬಂಧಕಗಳನ್ನಾಗಿ ಪರಿವರ್ತಿಸುತ್ತವೆ. ಈ ಅಂಟಿ ಅಂಶವು ಮಣ್ಣಿನ ಕಣಗನ್ನು ಹುಡಿಯಾಗಿಸುತ್ತವೆ]
ಕಾಂಪೋಸ್ಟ್ ಆಗುವ ಪ್ರಕ್ರಿಯೆ:
–    ಮಣ್ಣಲ್ಲಿರುವ ಸೂಕ್ಷ್ಮಾಣುಜೀವಿಗಳು ಅಥವಾ ಸಾವಯವ ವಸ್ತುಗಳನ್ನು ಕೊಳೆಯಿಸುವ ಜೀವಿಗಳು ಕಾಂಪೋಸ್ಟ್ ಮಾಡುತ್ತವೆ
–    ಸಾವಯವ ವಸ್ತುಗಳನ್ನು ಕೊಳೆಯಿಸಿ ಕಾಂಪೋಸ್ಟ್ ಆಗಿ ಪರಿವರ್ತಿಸುವ ಪ್ರಕ್ರಿಯೇಯೇ ಇದರ ಮೂಲ ತಿರುಳು. ಈ ಪ್ರಕ್ರಿಯೆಯಲ್ಲಿ ಅನೇಕ ಸೂಕ್ಷ್ಮಾಣುಜೀವಿಗಳು ಕಾರ್ಯ ನಿರ್ವಹಿಸುತ್ತವೆ.  ಇವುಗಳಲ್ಲಿ ಬಹುತೇಕ ಬಹುತೇಕ ಜೀವಿಗಳನ್ನು ಸೂಕ್ಷ್ಮದರ್ಶಕದಿಂದ ಮಾತ್ರ ನೋಡಲು ಸಾಧ್ಯ. ಕೆಲವನ್ನು ಮಾತ್ರವೇ ನಾವು ಬರಿಗಣ್ಣಿಂದ ನೋಡಬಹುದು. ಇವೆಲ್ಲವೂ ಉಪಯುಕ್ತ ಜೀವಿಗಳೇ. ಇಲ್ಲಿನ ಪ್ರತಿಯೊಂದು ಜೀವಿಯೂ ಕಚ್ಛಾ ಸಾವಯವ ವಸ್ತುಗಳನ್ನು ವಿಘಟಿಸಿ ಕೊನೆಗೆ ಕಾಂಪೋಸ್ಟ್ ತಯಾರಿಸುತ್ತವೆ.

 ಕಾಂಪೋಸ್ಟ್ ತಯಾರಿಸಲು ಬೇಕಾಗುವ ವಸ್ತುಗಳು
ಒಣ ವಸ್ತುಗಳು (ಇಂಗಾಲದ ಆಂಶವಿರುವ ಈ ವಸ್ತುಗಳು  ಸಾವಯವ ವಸ್ತುಗಳನ್ನು ಕಾಂಪೋಸ್ಟ್ ಆಗಿ ಪರಿವರ್ತಿಸುವ ಸೂಕ್ಷ್ಮಾಣುಜೀವಿಗಳಿಗೆ ಉತ್ತಮ ಆಹಾರ), ಹಸಿ ವಸ್ತುಗಳು (ಸಾರಜನಕ ಅಂಶವಿರುವ ಈ ವಸ್ತುಗಳೂ ಸಹ ಸೂಕ್ಷ್ಮಾಣುಜೀವಿಗಳಿಗೆ ಉತ್ತಮ ಆಹಾರ), ನೀರು,  ಸಗಣಿ,  ಬೂದಿ,  ಸುಣ್ಣ

-ಶ್ರೀನಿವಾಸ (ವಾಸು)