-ಚಳ್ಳಕೆರೆ ವೀರೇಶ್

 

ಕಡಿಮೆ ಮಳೆ ಬರುವ ಪ್ರದೇಶವಾದರೂ ಕೃಷಿಯಲ್ಲಿ ಯಶಸ್ವಿ ಕಾಣಲು ಚಿತ್ರದುರ್ಗ ಭಾಗದ ರೈತರು ಹಲವಾರು ಪರಿಪರಿ ಪಯೋಗಗಳ ಜತೆ ಯ ಲ್ಲಿ, ವಿವಿಧ ಹೊಸ ಕೃಷಿ ಪದ್ಧತಿಯನ್ನು ಸಹ ಕಂಡುಕೊಳ್ಳುತ್ತಿದ್ದಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭಗಳಿಸುವತ್ತ ತಮ್ಮ ಚಿತ್ತ ಹರಿಸಿ ಹೆಚ್ಚು ಲಾಭ ಕಾಣುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿಗೆ ಕೆಲವೇ ಕಿ.ಮೀ.ದೂರವಿರುವ ಚಿಕ್ಕಮ್ಮನಹಳ್ಳಿ ಗ್ರಾಮದ ದೇವರಹಟ್ಟಿಯ ಚನ್ನಯ್ಯ, ಓಬಜ್ಜಿ ದಂಪತಿಗಳು ಕಳೆದ ಎರಡ್ಮೂರು ವರ್ಷಗಳಿಂದ ತಮ್ಮ ಸಂಪ್ರದಾಯಿಕ ಶೇಂಗಾ ಕೃಷಿಗೆ ಗುಡ್‌ಬಾಯ್ ಹೇಳಿ, ಬಿಳಿ ಸೇವಂತಿಗೆ ಹೂ ಬೆಳೆಯುವತ್ತ ಗಮನಹರಿಸಿ ಕೈತುಂಬಾ ಹಣ ಗಳಿಸುತ್ತಿದ್ದಾರೆ. ಮಾರುಕಟ್ಟೆ, ಮದ್ಯವರ್ತಿಗಳ ಹಾವಳಿಯಿಂದ ಲಾಭಾಂಶ ಕಡಿಮೆಯಾಗುತ್ತಿದೆ ಎಂಬುವುದು ಬಿಟ್ಟರೆ ಈ ಬೆಳೆಯಲ್ಲಿ ಯಾವುದೇ ನಷ್ಟವಿಲ್ಲ ಎಂಬುವುದು ಇವರ ಅಭಿಪ್ರಾಯ.
ಲಾಬಾಂಶ ಹೇಗೆ :- ಆಂಧ್ರ ಮೂಲದಿಂದ ಬಿಳಿ ಸೇವಂತಿಗೆ ಒಂದು ಬೇರಿನ ಬೀಡ್(ಟ್ರೈ)ಗೆ ೩೦೦ ರಿಂದ ೪೦೦ ರೂನಂತೆ ಖರೀದಿಸಿ, ಇವರ ಒಂದು ಎಕರೆ ಭೂಮಿಯಲ್ಲಿ ನಾಟಿ ಮಾಡಿದೆ. ಒಂದು ಟ್ರೈನ ಬೇರು ಸುಮಾರು ಒಂದು ಬದುಗೆ ಬರುತ್ತದೆ. ನಾನು ಒಂದು ಎಕರೆಗೆ ೩ ಸಾವಿರದಂತೆ ೪೦೦ ಟ್ರೈನ ಬೇರು ಖರೀದಿಸಿ ನಾಟಿ ಮಾಡಿದ್ದೇನೆ. ಈ ಬೇರುಗಳು ಗಿಡಗಳಾಗಿ ಸುಮಾರು ಮೂರ್‍ನಾಲ್ಕು ಬಾರಿ ಹೂಗಳನ್ನು ಕೊಡುತ್ತವೆ. ನಂತರ ಬೇರುಗಳನ್ನು ಸ್ಥಳಾಂತರ ಮಾಡಿ ಪೋಷಣೆ ಮಾಡಿದಲ್ಲಿ ಅವು ಬೆಳೆದು ಮತ್ತೇ ಮೂರ್‍ನಾಲ್ಕು ಬಾರಿ ಹೂಗಳನ್ನು ನೀಡುತ್ತವೆ. ಹೀಗೆ ಸುಮಾರು ಐದಾರು ಬಾರಿ ಅದೇ ಬೇರುಗಳನ್ನು ಸ್ಥಳಾಂತರ ಮಾಡಿ ಫಸಲು ಪಡೆಯಬಹುದು ಎನ್ನುತ್ತಾರೆ ಚನ್ನಯ್ಯ ಮಗ ಚನ್ನಕೇಶವ.
ಬೆಳೆಯುವುದು ವಿಧಾನ :– ಇದು ಸುಮಾರು ನಾಲ್ಕು ತಿಂಗಳ ಬೆಳೆಯಾಗಿದೆ. ಬೇರುಗಳನ್ನು ಕುಚ್ಚುವ(ನಾಟಿ) ಮುನ್ನ ಭೂಮಿಗೆ ಕೊಟ್ಟಿಗೆ ಗೊಬ್ಬರ, ಡಿಎಪಿ ಸೇರಿದಂತೆ ಕೃಷಿ ಇಲಾಖೆಯ ಮಾರ್ಗದರ್ಶನದಂತೆ ಥರಹೇವಾರಿ ಗೊಬ್ಬರವನ್ನು ಹಾಕಿ ಮಡಿಕೆ ಹೊಡೆಯಬೇಕು. ನಾಟಿ ಮಾಡುವ ಮುನ್ನ ಒಂದೆರಡು ಬಾರಿ ನೀರಾಯಿಸಿ ತೇವಾಂಶ ಕಾಪಾಡಿಕೊಂಡು ನಂತರ ಬೇರು ಕುಚ್ಚ ಬೇಕು. ಬೇರುಗಳು ನಾಟಿ ಮಾಡಿ ಸುಮಾರು ೨ ತಿಂಗಳಿಗೆ ಹೂ ಬಿಡಲು ಪ್ರಾರಂಬಿಸುತ್ತದೆ. ಗಿಡ ಅಂಟಿನ ರೂಪದಾದರಿಂದ ಕೀಟಗಳ ಭಾದೆ ಹೆಚ್ಚಿರುತ್ತದೆ. ಕಾಲ ಕಾಲಕ್ಕೆ ಔಷಧಿ ಅಗತ್ಯವಾಗಿ ಸಿಂಪಡಿಸಲೇ ಬೇಕು.
ಔಷಧಿ ಸಿಂಪಡಣೆ :- ನಾಟಿ ಮಾಡಿದ ಐದಾರು ದಿನಕ್ಕೆ ಬೇರುಗಳಿಂದ ಚಿಗುರು ಕಾಣಿಸಿಕೊಳ್ಳುತ್ತದೆ. ಚಿಗುರು ಕಾಣಿಸಿಕೊಂಡ ಎರಡು ದಿನಗಳಿಂದ ಹೂ ಪೂರ್ಣಗೊಳ್ಳುವ ತನಕ ಕೊಪೇಡ್, ನೆಟ್, ಬೋರಾಪವರ್, ನಿಟ್ರೋಬುಕ್ ಸೇರಿದಂತೆ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಸಿಂಪಡಣೆ ಮಾಡಿದಲ್ಲಿ ಉತ್ಕೃಷ್ಟವಾದ ಹೂ ಬರುತ್ತವೆ. ನಾಟಿ ಮಾಡಿದಾಗಿನಿಂದ ಸುಮಾರು ೫ ಸಾವಿರಕ್ಕೂ ಹೆಚ್ಚು ಔಷಧಿಗೆ ಹಣ ಪೋಲಾಗುತ್ತದೆ ಎನ್ನುವುದು ಅವರ ಬೇಸರ ಸಂಗತಿ. ಆದರೂ ಕೆಲ ಫಸಲಿಗೆ ಹೆಚ್ಚಿನ ಲಾಭ ಬರುವುದು ಕಂಡಿತ ಎಂದು ತಮ್ಮ ಸಂತಸ ಹಂಚಿಕೊಳ್ಳುತ್ತಾರೆ.
ನಮ್ಮ ಸುಮಾರು ಮೂರು ಎಕರೆ ಜಮೀನಿನ ಒಂದು ಎಕರೆ ಭಾಗಕ್ಕೆ ಈ ಬಿಳಿ ಸೇವಂತಿಗೆ ನಾಟಿ ಮಾಡಿದ್ದು, ಒಟ್ಟಾರೆಯಾಗಿ ನಾಟಿ ಮಾಡಿದಾಗಿನಿಂದ ೭ ರಿಂದ ೧೦ ಸಾವಿರ ರೂಪಾಯಿ ಖರ್ಚು ಬಂದಿದೆ. ಒಮ್ಮೆ ಬೇರು ತಂದರೆ ಐದಾರು ಬಾರಿ ನಾಟಿ ಮಾಡಬಹದು ಮತ್ತು ಮಾರಾಟವನ್ನು ಮಾಡಬಹುದು. ಚಿತ್ರದುರ್ಗ, ಚಳ್ಳಕೆರೆ, ತುಮಕೂರು, ಬೆಂಗಳೂರುಗಳಿಂದ ಹೂವಿಗೆ ಬೇಡಿಕದೆ ಇದೇ ಒಂದು ಕೆಜಿಗೆ ೧೫ ರಿಂದ ೨೦ ರೂವರೆಗೂ ಸಿಗುತ್ತದೆ. ಒಮ್ಮೆ ಮಾರುಕಟ್ಟೆಗೆ ೧೦೦ ರಿಂದ ೧೫೦ ಕೆ.ಜಿಯಷ್ಟು ಹೂಗಳನ್ನು ಮಾರಾಟ ಮಾಡಿ, ಐದಾರು ಬೀಡಿಗೆ ಸುಮಾರು ೧೫ ಸಾವಿರದಿಂದ ೨೦ ಸಾವಿರದವರೆಗೂ ಹಣ ನೋಡುತ್ತೇವೆ. ಖರ್ಚು ಕಡಿಮೆಯಲ್ಲಿ ಬೆಳೆಯುವ ಬೆಳೆ ಇದಾಗಿದೆ ಎಂದು ನುಡಿಯುತ್ತಾರೆ.

ಹೆಚ್ಚಿನ ಮಾಹಿತಿಗೆ 91083 38927  ಗೆ ಸಂಪರ್ಕಿಸ ಬಹುದು.