ಚಳ್ಳಕೆರೆ ವೀರೇಶ್.
ಚಿತ್ರದುರ್ಗ ಜಿಲ್ಲೆ ಬರಪೀಡಿತ ತಾಲೂಕು ಈ ಭಾಗದಲ್ಲಿ ಕೃಷಿ ಮಾಡುವುದೇ ಒಂದು ಸಾಹಸದ ವಿಷಯ ಇಂತಹ ಕೃಷಿ ಪರಿಸ್ಥಿತಿಯಲ್ಲಿ ನಗರದ ಉದ್ಯಮಿಯೊಬ್ಬರು ತಮ್ಮ ಉದ್ಯಮದ ಜೊತೆ ಜತೆಯಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಸಾಧನೆ ಮಾಡಿರುವುದು ಕೃಷಿಕರಲ್ಲಿ ಆಚ್ಚರಿ ಉಂಟು ಮಾಡುತ್ತದೆ.
ಚಳ್ಳಕರೆ ನಗರದ ಅಜ್ಜಯ್ಯನ ಗುಡಿ ರಸ್ತೆಯ ಎಂ.ಆರ್ ಮೀಲ್ ಮಾಲೀಕ ಮಧುರವರು ತಮ್ಮ ಉದ್ಯಮದ ಜೊತೆಯಲ್ಲಿಯೂ ಸಪೋಟ ಬೆಳೆ ಬೆಳೆದು ಉತ್ತಮ ಲಾಭದತ್ತ ನಡೆಯುವ ಮೂಲಕ ಕೃಷಿಕರಿಗೆ ಹುಬ್ಬೇರಿಸುವಂತೆ ಮಾಡಿದ್ದಾರೆ. ಬಿ.ಕಾಂ ಪದವೀಧರರಾದ ಮಧು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ತನ್ನ ತಂದೆ ಜಿ.ವಿ.ರಾಮದಾಸ್‌ರವರ ಕೃಷಿ ಆಸಕ್ತಿಯಿಂದ ಸುಮಾರು ೧೨ ಎಕರೆ ಜಾಗದಲ್ಲಿ ಕೃಷಿ ಕಾರ್ಯದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವ ಮೂಲಕ ಸಾಧನೆ ಮಾಡುತ್ತಿದ್ದಾರು.
ತಂದೆಯ ಮರಣದ ನಂತರ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡ ಮಧುರವರು ಇಂದು  ತನ್ನ ತೋಟದಲ್ಲಿ ಮೆಕ್ಕೆಜೋಳ, ಜೋಳ, ಪೇರಲ, ತೆಂಗು, ಟಗರು, ಹಸು ಹೀಗೆ ಹಲವಾರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೋಡಗಿಕೊಂಡಿದ್ದಾರೆ. ಸುಮಾರು ೧೦ ವರ್ಷಗಳ ಹಿಂದೆ ಸ್ನೇಹಿತರ ಮಾತಿನಂತೆ ಅವರ ತಂದೆ ರಾಮದಾಸ್ ಸುಮಾರು ಎರಡು ಎಕರೆಗೆ ತಮಿಳುನಾಡಿನ ಪೇರಕುಳಂ(ಪಿಕೆಎಂ) ನಿಂದ ಸಪೋಟ ಗಿಡಗಳನ್ನು ತಂದು ನಾಟಿ ಮಾಡಿದರು, ಇಂದು ಅದೇ ಸಪೋಟ ಬೆಳೆ ಉತ್ತಮ ಲಾಭದತ್ತ ನಡೆಸುತ್ತಿದೆ ಎಂದು ಅವರು ನುಡಿಯುತ್ತಾರೆ.
ಗಿಡಗಳ ಹಾರೈಕೆ;- ತಂತ್ರಗಾರಿ ಮುಂದುವರೆದ್ದರೂ ಅವರು ವಿದ್ಯವಂತರಾಗಿದ್ದರೂ ಸಹ ತಮ್ಮ ತೋಟಕ್ಕೆ ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ತಮ್ಮ ತೋಟದಲ್ಲಿರುವ ಹಸುವಿನ ಗೊಬ್ಬರ ಹಾಗೂ ಅಲ್ಲಿಯೇ ಸಿಗುವ ಪರಿಸರ ವಸ್ತುಗಳಾದ ಎಲೆ, ತೆಂಗುವಿನ ಗರಿಯನ್ನು ಗೊಬ್ಬರ ಮಾಡಿ ಗಿಡಗಳಿಗೆ ಬಳಕೆ ಮಾಡಿಕೊಂಡು ಸಾವಯನ ಪರ್ಟಿಲೈಜರ್ ತಯಾರು ಮಾಡಿಕೊಂಡು ತೋಟಕ್ಕೆ ಬಳಕೆ ಮಾಡುತ್ತಾರೆ. ಈ ಗೊಬ್ಬರಿಂದ  ತೋಟದ ಪ್ರತಿಯೊಂದು ಫಸಲು ಸಮೃದ್ಧಿಯಾಗಿ ಬೆಳೆದಿದೆ. ಅದರಲ್ಲೂ ಸಪೋಟ ಒಂದು ಗಿಡಕ್ಕೆ ಸುಮಾರು ೩೦-೩೫ ಕೆಜಿಯಷ್ಟು ಸಪೋಟ ಹಣ್ಣುಗಳನ್ನು ಬಿಡುತ್ತಿವೆ.
ಸುಮಾರು ಎರಡು ಎಕರೆಯಲ್ಲಿ ಇರುವ ಈ ಸಪೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಕೆಯಿಲ್ಲ. ನಮ್ಮಲ್ಲಿ ಇರುವ ಹಸುಗಳ, ಕುರಿಗಳಿಂದ ಬರುವ ಗೊಬ್ಬರವನ್ನೇ ಬಳಕೆ ಮಾಡಿಕೊಳ್ಳುವುದರಿಂದ ಗಿಡಗಳಿಗೂ ಸಹ ಯಾವುದೇ ರೋಗಕ್ಕೆ ತುತ್ತಾಗದೆ ಉತ್ತಮವಾಗಿ ದಟ್ಟವಾಗಿ ಬೆಳೆದು ನಿಂತಿವೆ ಎನ್ನುತ್ತಾರೆ ಮಾಲೀಕ ಮಧು.  ೧೦ ವರ್ಷಗಳ ಹಿಂದೆ ತಂದೆಯವರು ತಮಿಳುನಾಡಿನ ಪೇರಕುಳಂ(ಪಿಕೆಎಂ) ಸಸಿಗಳನ್ನು ತರೆಸಿಕೊಳ್ಳಲು ಹಾಗೂ ನಾಟಿ ಮಾಡಲು ಸುಮಾರು ೨ ಲಕ್ಷದಿಂದ ೩ ಲಕ್ಷ ಖರ್ಚು ಮಾಡಲಾಯಿತು. ಒಂದು ಸಪೋಟ ಸಸಿಗೆ ತಗುಲಿದ ವೆಚ್ಚದ ಕೇವಲ ೧೦೦ ರೂಪಾಯಿಯಂತೆ ಸುಮಾರು ೩೦೦ ರಿಂದ ೩೫೦ಕ್ಕೂ ಹೆಚ್ಚು ಸಸಿಗಳನ್ನು ತರೆಸಿ ನಾಟಿ ಮಾಡಿಸಿದರು. ನಮ್ಮ ತೋಟದಲ್ಲಿ ಎರಡೂ ಬೋರ್‌ಗಳಲ್ಲಿಯೂ ಉತ್ತಮ ನೀರಿನ ಸೌಲಭ್ಯವಿದ್ದು ಅದ್ದರಿಂದ ಉತ್ತಮ ಫಸಲು ಸಹ ದೊರೆಯುತ್ತಿದೆ. ಆರು ತಿಂಗಳಿಗೆ ಒಂದು ಬೆಳೆಯಾದ ಈ ಸಪೋಟಕ್ಕೆ ಮಂಗಳೂರು, ಬೆಂಗಳೂರು, ದಾರವಾಡ, ದಾವಣಗೆರೆ, ಆಂದ್ರಪ್ರದೇಶ, ತಮಿಳುನಾಡು ಹೀಗೆ ಹಲವಾರು ಕಡೆಗಳಲ್ಲಿ ಉತ್ತಮ ಬೇಡಿಕೆ ಇದೆ. ಒಂದು ಗಿಡಕ್ಕೆ ೩೦ ರಿಂದ ೪೦ ಕೆಜಿಯಷ್ಟು ದಟ್ಟವಾಗಿ ಹಿಡಿದ ಈ ಹಣ್ಣುಗಳು ಎಂದಿಗೂ ಸಹ ನಷ್ಟಕ್ಕೆ ಒಳಪಡಿಸಿಲ್ಲ. ಮಾರುಕಟ್ಟೆಯಲ್ಲಿ ೧೦ ರೂಪಾಯಿಂದ ಈಡಿದು ೪೫-೫೦ ರೂಪಾಯಿಯವರೆಗೂ ಸಹ ಬೆಲೆ ಇರುತ್ತದೆ. ಆಗ ನಮಗೆ ಉತ್ತಮ ಲಾಭ ದೊರೆಯುತ್ತದೆ. ನಾವು ಕೂಲಿಗಾರರಿಗೆ ಹಾಗೂ ತೋಟವನ್ನು ಹಾರೈಕೆ ಮಾಡುವವರಿಗೆ ತಿಂಗಳಿಗೆ ಸುಮಾರು ೨೦-೩೦ ಸಾವಿರ ಖರ್ಚು ಮಾಡುವುದು ಬಿಟ್ಟರೆ ಬೇರೆಯಾವುದೇ ಖರ್ಚ ಸಹ ನಮ್ಮಿಂದ ಹೊರ ಹೋಗುವುದಿಲ್ಲ. ಒಂದು ಲೋಡ್‌ಗೆ ಸುಮಾರು ಎಂದರೂ ೩ ರಿಂದ ೪ ಲಕ್ಷದವರೆಗೂ ಸಹ ಲಾಭವನ್ನು ಗಳಿಸ ಬಹುದು ಎಂದು ಅವರು ಹೇಳುತ್ತಾರೆ.  ತಮ್ಮ ತಂದೆ ಕೃಷಿ ಕ್ಷೇತ್ರದಲ್ಲಿ ತೋರಿಸುತ್ತಿದ್ದ ಆಸಕ್ತಿ ಇಂದು ನಮ್ಮಲ್ಲಿಯೂ ಕೃಷಿಯ ಬಗ್ಗೆ ಕಾಳಜಿ ಮೂಡಿಸಿದೆ ಎಂದು ತಮ್ಮ ಕೃಷಿಯ ಬಗ್ಗೆ ಇರುವ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ೯೮೪೫೨೮೩೩೪೨ ಗೆ ಸಂಪರ್ಕಿಸಿ ಮಾಹಿತಿ ಪಡೆಯ ಬಹುದು