ಲೇಖನ -: ಚಳ್ಳಕೆರೆ ವೀರೇಶ್,

 

 

ಕಳೆದ ಸುಮಾರು ಆರೇಳು ವರ್ಷಗಳಿಂದ ವಿವಿಧ ಕೃಷಿ ಮಾಡಿ ಹಾಕಿದ ಬಂಡವಾಳವೂ ಸೇರಲಿಲ್ಲ, ಅತ್ತಕಡೆ ಕೊಳವೆ ಬಾವಿಯಲ್ಲಿ ನೀರು ಸಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿರುವ ಸಂಧಿಗ್ಧ ಪರಿಸ್ಥಿತಿ ಇರುವ ಒಂದಿಂಚು ನೀರಿನಲ್ಲಿ ಏನಾದರೂ ಬೆಳೆಯಬೇಕು ಎನ್ನ ಹಠದಿಂದ ಈರೇ, ಸೌತೆಕಾಯಿಯನ್ನು ಬೆಳೆದು ಸೈ ಎನ್ನಿಸಿಕೊಂಡ ರೈತನ ಯಶೋಗಾಧೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ದುಗ್ಗಾವರ ರಸ್ತೆ ಮೂಲಕ ಸ್ವಲ್ಪ ದೂರ ಕ್ರಮಿಸಿದರೆ ರೈತ ಸಿಂಪಣ್ಣ, ವೀರಭದ್ರಪ್ಪ ಸಹೋದರರ ಹೊಲ ಹಸಿರಿನಿಂದ ಕಂಗೋಳಿಸುವ ಈರೇ ಬಳಿ ರಸ್ತೆಒಕ್ಕರ ಮನಸೆಳೆಯುತ್ತದೆ. ಇರುವ ಎರಡು ಎಕರೆ ಜಮೀನು ಈರುಳ್ಳಿ, ಟಮೋಟ, ಮೆಕ್ಕೆಜೋಳ, ರಾಗಿ, ಶೇಂಗಾ ಬೆಳೆಯನ್ನು ಬೆಳೆದು ಹಾಕಿದ ಬಂಡವಾಳವೂ ಕೈಸೇರದೆ ಕೈಸುಟ್ಟುಕೊಂಡ ರೈತನಿಗೆ ಸ್ನೇಹಿತ ಕುಬೇಂದ್ರರೆಡ್ಡಿ ಸಲಹೆಯಂತೆ ‘ನಾಗ’ ತಳಿಯ ಈರೇ ಕಾಯಿ ಬೀಜವನ್ನು ಕಳೆದ ಜೂನ್ ಮೂರನೇ ವಾರದಲ್ಲಿ ನಾಟಿ ಮಾಡಿದರು. ಈಗ ಈರೇಗೆ ಎಲ್ಲಿಲ್ಲದ ಬೇಡಿಕೆ ಬಂದು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸಾಲದಿಂದ ಕುಗ್ಗಿದ್ದ ರೈತ ಲಾಭದಿಂದ ಹಿಗ್ಗಿದ್ದಾನೆ.

ಎರಡು ಎಕರೆಯಲ್ಲಿ ಎಷ್ಟು ನಾಟಿ :- ನಾಗ ತಳಿಯ ಬೀಜವನ್ನು 580 ರೂಗೆ ಒಂದು ಡಬ್ಬದಲ್ಲಿ 260 ಬೀಜವುಳ್ಳ 26 ಡಬ್ಬದ ಬೀಜವನ್ನು ಎರಡು ಎಕರೆಯಲ್ಲಿ ಚೆಲ್ಲಲಾಗಿದೆ. ಇದಕ್ಕೆ ಸುಮಾರು 6700 ಸಸಿಗಳು ಈಗ ಫಲ ನೀಡುತ್ತಿದ್ದು, 10 ಅಡಿಗಳ ಅಂತರದಲ್ಲಿ ನಾಟಿ ಮಾಡಿ ಉಳಿದ ಜಾಗಕ್ಕೆ ಸೌತೆ ಬಳ್ಳಿ ಹಾಕಿದ್ದಾರೆ. ಎರಡೂ ಬೆಳೆಯನ್ನು ದಿನಬಿಟ್ಟು ದಿನದಲ್ಲಿ ಕೊಯ್ಯುಲು ಮಾಡುತ್ತಿದ್ದು ವಾರದಲ್ಲಿ ಸುಮಾರು 40 ಕೆಜಿಯ 100ಕ್ಕೂ ಹೆಚ್ಚು ಬಾಕ್ಸ್ ಕಳುಹಿಸಲಾಗಿದೆ. ಈರೇ ಬಳ್ಳಿಯ ಮಧ್ಯದಲ್ಲಿ ಸೌತೆ ಕಾಯಿ ಬಳಿ ಸಹ ನಮಗೆ ಸಹಕಾರಿಯಾಗಿದೆ. ಕೂಲಿಹಣ, ಔಷಧಿಗೆ ಬೇಕಾಗುವ ಖರ್ಚು ಸೌತೆಕಾಯಿ ಬೆ¼ಯಲ್ಲೇ ಬಂದು ಹೋಗುತ್ತದೆ. ಈರೇ ಕಾಯಿಯಿಂದ ಬರುವ ಎಲ್ಲಾ ಲಾಭ,ನಷ್ಟವೂ ನಮ್ಮದೆಯಾಗಿದೆ. ಮಿಶ್ರ ಬೆಳೆ ಪದ್ದತಿಯಿಂದ ಒಂದು ಲಾಭ ಮತ್ತೊಂದು ಖರ್ಚು ಮಾಡಬಹುದು ಎಂಬುವುದು ರೈತ ಸಿಂಪಣ್ಣನವರ ಪ್ಲಾನ್ ಆಗಿದೆ.
ಕೃಷಿ ವಿಧಾನ :- ಒಂದು ಬೆಳೆಯ ನಂತರ ಇವರು ಸುಮಾರು 4 ತಿಂಗಳ ಕಾಲ ಭೂಮಿಗೆ ಗೊಬ್ಬರ, ನೀರು ಕೊಡುತ್ತಾ ಬರುತ್ತಾರೆ. 3 ತಿಂಗಳು ಪೂರ್ಣಗೊಳಿಸಿ ನಾಲ್ಕನೇ ತಿಂಗಳಿಗೆ ಬರುವ ಮುನ್ನವೇ ಯಾವ ಬೆಳೆ ಹಾಕಬೇಕು ಎಂದು ಕೃಷಿ ಇಲಾಖೆ, ಸ್ನೇಹಿತರ ಸಲಹೆ ಪಡೆಯುತ್ತಾರೆ. ಆಯಾ ಸಂದರ್ಭದಲ್ಲಿ ಯಾವುದು ಸೂಕ್ತ ಎಂಬುವುದು ತಿಳಿಯುವುದರಿಂದ ನಷ್ಟದ ಮಾತೇ ಇರುವುದಿಲ್ಲ ಎಂಬುವುದು ಅವರ ಮಾತು. ನಾಟಿ ಮಾಡುವ ಮುನ್ನ ಕೊಟ್ಟಿಗೆ ಗೊಬ್ಬರ ನೀಡಿ, ಬಂದು ನಿರ್ಮಿಸಿ ಡ್ರಿಫ್ ಮಾಡಲಾಗಿದೆ. ಬೀಜ ಹಾಕಿ 8-9 ದಿನಗಳಲ್ಲಿ ಮೊಳಕೆ ಹೊಡೆಯಲಾರಂಭಿಸುತ್ತದೆ. ಸಸಿ ಎಲೆ ಬಿಡುವ ಸಂದರ್ಭದಲ್ಲಿ ರೋಗಕ್ಕೆ ಅನುಗುಣವಾಗಿ ಔಷಧಿ ಸಿಂಪಡಣೆ ಮಾಡಿದರೆ ಸಾಕು, ನಂತರ ಹೂ ಬಿಡುವ ಸಂದರ್ಭದಲ್ಲಿ ಸಾಲಿಗ್ರಾಂ, 50-50 ಔಷಧಿಯನ್ನು ಸಿಂಪಡಣೆ ಮಾಡಲಾಗಿದೆ. 35 ದಿನಕ್ಕೆ ಫಲಬಿಡಲಾರಂಭಿಸುತ್ತದೆ. ಅಲ್ಲಿಂದ ಬಳ್ಳಿಯನ್ನು ಸೂಕ್ಷ್ಮವಾಗಿ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ಔಷóóಧ, ಬೆಳಗ್ಗೆ-ಸಂಜೆ ಎರಡು ಬಾರಿ ನೀರು ಹಾಯಿಸಬೇಕು. ಬಳ್ಳಿಯು ಕೆಳಗೆ ತಾಗದಾಗೆ ಕಟ್ಟಿಗೆ ಮತ್ತು ದಾರದಿಂದ ಸುಮಾರು 6 ಅಡಿಗಳಗಷ್ಟು ಎತ್ತರಕ್ಕೆ ಬಳ್ಳಿ ಹೋಗುವಂತೆ ಮಾಡಿರುವುದರಿಂದ ಸಮೃದ್ಧಿ, ಫಲವತ್ತಾದ ಬೆಳೆ ಕೈಸೇರಿದೆ ಎಂದು ನುಡಿಯುತ್ತಾರೆ ವೀರಭದ್ರಪ್ಪ.

ಮಾರುಕಟ್ಟೆ ಹೇಗೆ :- ಪ್ರಸ್ತುತ ಈರೇ ಕಾಯಿಗೆ ಸ್ಥಳೀಯ ಮಾರುಕಟ್ಟೆಗಿಂತ ಹೈದರಬಾದ್, ಬಾಂಬೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲಿನ ವ್ಯಾಪಾರಿಗಳೇ ಸ್ಥಳಕ್ಕೆ ಬಂದು ಖರೀದಿಸುತ್ತಿದ್ಧಾರೆ. 40 ಕೆ.ಜಿಯ ಒಂದು ಬಾಕ್ಸ್‍ಗೆ ಸುಮಾರು 1000 ದಿಂದ 1500 ರೂವರೆಗೂ ಸಿಗುತ್ತಿದೆ. ಈಗಾಗಲೇ ಮೂರು ಬಾರಿ 150 ಕ್ಕೂ ಹೆಚ್ಚು ಬಾಕ್ಸ್‍ಗಳನ್ನು ಹೈದರಬಾದ್‍ನ ಕಂಪನಿಯವರು ಖರೀದಿಸಿದ್ದಾರೆ.
ಖರ್ಚು, ಲಾಭ :- ಸುಮಾರು ಎರಡು ತಿಂಗಳಿಗೆ ಕೂಲಿ ಕಾರ್ಮಿಕರಿಗೆ 40 ಸಾವಿರ, 20 ಸಾವಿರ ಬೀಜ, ಔಷಧಿಗೆ ಸೇರಿದಂತೆ ಸುಮಾರು 1.25 ಲಕ್ಷ ಖರ್ಚು ಬಂದಿದೆ. ಈಗಾಗಲೇ 1.50 ಲಕ್ಷರೂಗಳನ್ನು ಪಡೆದ್ದು ಅಸಲು ಬಂದಿದೆ. ಈಗ ಬರುವುದೆಲ್ಲಾ ಲಾಭದ್ದಾಗಿರುತ್ತದೆ. ಇನ್ನೂ ಸುಮಾರು 5 ಬೀಡ್ ಸಿಗುವ ನಿರೀಕ್ಷೆ ಇದೆ, ಸೌತೆ, ಈರೇ ಎರಡೂ ಜೊತೆಯಲ್ಲಿ ನಷ್ಟದ ಮಾತಿಲ್ಲ ಎನ್ನುತ್ತಾರೆ ರೈತ ಸಿಂಪಣ್ಣ. ಹೆಚ್ಚಿನ ಮಾಹಿತಿಗಾಗಿ 9008297022, 7892327796ಗೆ ಸಂಪರ್ಕಿಸಬಹುದು.