ವರದಿ: ಚಳ್ಳಕೆರೆ ವೀರೇಶ್.

 

ಇರುವದು ಅಂಗೈಯಷ್ಟು ಭೂಮಿ, ಫಲವತ್ತಯೂ ಕಡಿಮೆ, ಎಷ್ಟೇ ನೀರು ಹಾಕಿದರೂ ಕುಡಿದು ಕಂಗಾಲು ಮಾಡಿವ ಭೂಮಿಯಲ್ಲೇ ವಿವಿಧ ತರಕಾರಿ, ಹೂಗಳನ್ನು ಬೆಳೆದು ಇತರೆ ರೈತರಿಗೆ ಮಾದರಿಯಾದ ರೈತ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಅತಿ ಹೆಚ್ಚು ಗುಡಿಕಟ್ಟಿನ ಮ್ಯಾಸನಾಯಕ ಸಮುದಾಯ ಇವರುವ ನನ್ನಿವಾಳ ಗ್ರಾಮ ಪಂಚಾಯಿತಿ ಮಾರ್ಗವಾಗಿ ಹೋಗುವ ಜನರನ್ನು ಕೈಬೀಸಿ ತನ್ನತ್ತ ಸೆಳೆಯುವಂತೆ ಕಾಟ್ಲರಹಟ್ಟಿ ರೈತ ಪಾಲಯ್ಯ ಎಂಬುವವರ ಹೊಲದಲ್ಲಿನ ನಳನಳಿಸುವ ಕೆಂಪು ಬಣ್ಣ ಹೊದ್ದ ವೆಲ್ ವೇಟ್(velvet flower) ಪ್ಲವರ್. ಇವರ ನಾಲ್ಕು ಎಕರೆ ಜಮೀನಿಗೆ ಇರುವ ಒಂದು ಕೊಳವೆ ಬಾವಿಯಲ್ಲಿ ಕೇವಲ ಅರ್ಥ ಇಂಚು ನೀರು ಬರುತ್ತಿವೆ. ಅವುಗಳನ್ನೇ ಬಳಸಿ ಕೃಷಿ ಮಾಡುವ ದಾವಂತದಲ್ಲಿ ರೈತ ಒಂದು ಸಣ್ಣ ಉಪಾಯವನ್ನು ಮಾಡಿದ್ದಾರೆ. ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಒಂದಾಲ್ಲ ಒಂದು ಬೆಳೆಯಲ್ಲಿ ಕೈತುಂಬಾ ಲಾಭ ಮಾಡುತ್ತಿದ್ಧಾರೆ. ಮಳೆಯ ಕೊರತೆ, ಬೆಲೆಯ ಏರಿಳಿತ, ಕೃಷಿಗೆ ಬೇಕಾಗುವಷ್ಟು ನೀರಿಲ್ಲ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ ಹೀಗೆ ಹಲವಾರು ಸಮಸ್ಯೆಯ ಸುಳಿಗೆ ಸಿಕ್ಕಿ ಕೃಷಿಯೇ ಬೇಡಪ್ಪ ಎಂದು ತಲೆ ಮೇಲೆ ಕೈಹೊದ್ದು ಕುಳಿತ ರೈತನ, ಸಂಬಂಧಿಯ ಒತ್ತಡಕ್ಕೆ ಮಣಿದು ಹೊಲಕ್ಕೆ ಬೇಕಾಬಿಟ್ಟಿಯಾಗಿ ಬೀಸಾಡಿದ ಹೂವಿನ ಬೀಜ, ಇಂದು ಅ ಬೀಜಗಳು ಗಿಡಗಳಾಗಿ ಒಂದು ಕುಟುಂಬ ನಿರ್ವಹಣೆ ಸಹಾಯವಾಗುತ್ತಿವೆ.

ಕಳೆದ ೧೦ ವರ್ಷಗಳಿಂದ ಮಳೆಯ ಕೊರತೆಯನ್ನು ಕಂಡ ಪಾಲಯ್ಯ ವೆಲ್‌ವೇಟ್ ಹೂ, ಬಿಳಿ ಸೇವಂತಿ, ಮೆಣಸೀನಕಾಯಿ, ಈರೇ, ಬದನೆ, ಸೋರೆ, ಜವಳಿ, ರುದ್ರಾಕ್ಷಿ ಹೂ, ಆಗಲ ಹೀಗೆ ಥರೇಹವಾರಿ ಬೆಳೆಗಳನ್ನು ಬೆಳೆದು ತಮ್ಮ ಕುಟುಂಬ ನಿರ್ವಹಣೆ ಯಾವುದೇ ಆತಂಕವಿಲ್ಲದೆ ನಡೆಸುತ್ತಿದ್ಧಾರೆ. ಮನೆ ಮಂದಿಯೇ ಈ ತೋಟದ ಕೂಲಿಕಾರ್ಮಿಕರು, ನಾವೇ ಈ ಎಲ್ಲಾ ಕೃಷಿ ಕಾರ್ಯಗಳನ್ನು ನೋಡಿಕೊಳ್ಳುವುದರಿಂದ ಲಾಭ ನಷ್ಟ ನಮ್ಮದೆ ಎನ್ನುತ್ತಾರೆ. ಮಳೆಯ ಕೊರತೆ, ಬೆಲೆಯ ಏರಿಳಿತ, ಕೃಷಿಗೆ ಬೇಕಾಗುವಷ್ಟು ನೀರಿಲ್ಲ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ ಹೀಗೆ ಹಲವಾರು ಸಮಸ್ಯೆಯ ಸುಳಿಗೆ ಸಿಕ್ಕಿ ಕೃಷಿಯೇ ಬೇಡಪ್ಪ ಎಂದು ತಲೆ ಮೇಲೆ ಕೈಹೊದ್ದು ಕುಳಿತ ರೈತನ, ಸಂಬಂಧಿಯ ಒತ್ತಡಕ್ಕೆ ಮಣಿದು ಹೊಲಕ್ಕೆ ಬೇಕಾಬಿಟ್ಟಿಯಾಗಿ ಬೀಸಾಡಿದ ಹೂವಿನ ಬೀಜ, ಇಂದು ಅ ಬೀಜಗಳು ಗಿಡಗಳಾಗಿ ಒಂದು ಕುಟುಂಬ ನಿರ್ವಹಣೆ ಸಹಾಯವಾಗುತ್ತಿವೆ.

ಮಳೆಯ ಕೊರತೆಯಿಂದ ಕೃಷಿಯೇ ಕೈಬಿಟ್ಟು ಕುಳಿತ ಇವರಿಗೆ ಸಂಬಂಧಿ ವೆಲ್‌ವೇಟ್ ಹೂಗಳ ಬೀಜಗಳನ್ನು ಉಚಿತವಾಗಿ ತಂದುಕೊಟ್ಟರು. ಉತ್ಸಾಹವಿಲ್ಲದ ರೈತ ಅದನ್ನೂ ಬೇಕಾಬಿಟ್ಟಿಯಾಗಿ ತನ್ನ ಹೊಲದ ಒಂದು ಮೂಲೆಯಲ್ಲಿ ಬೀಜವನ್ನು ಚೆಲ್ಲಿದ. ತರಕಾರಿಗೆ ನೀರು ಹಾಯಿಸುವಾಗ ಅ ಗಿಡಗಳಿಗೂ ನೀರು ಹೋಗಿ ೫ ದಿನಗಳಲ್ಲಿ ಮೊಳಕೆ ಎಲೆ ಬಿಡಲಾರಂಭಿಸಿತು. ಎಂದಿನಂತೆ ಔಷಧಿ, ಗೊಬ್ಬರ ತರಕಾರಿಗೆ ನೀಡಿದಾಗಿ ಅವುಗಳಿಗೂ ಹಾಕಲಾಗುತ್ತಿತ್ತು. ಒಂದು ತಿಂಗಳು ಕಳೆಯುತ್ತಾ ಗಿಡದಲ್ಲಿ ಕೆಂಪನೆಯ ಗುಚ್ಚುಗುಚ್ಚು ಹೂವಿನ ಮೊಗ್ಗುಗಳು ಕಾಣಿಸಿಕೊಂಡವು. ನಿರ್ಲಕ್ಷತೆಯಿಂದಲೇ ಅವುಗಳನ್ನು ಕಿತ್ತು ಮಾರುಕಟ್ಟೆಗೆ ಮಾರಾಟ ಮಾಡಲಾಯಿತು. ಮೊದಲ ಬಾರಿಗೆ ಯಾವುದೇ ಬೆಲೆ ಸಿಗದೆ ನಿರಾಸಕ್ತಿ ಉಂಟು ಮಾಡಿದ ವೆಲ್‌ವೇಟ್ ಹೂಗಳು ಪ್ರಸ್ತುತ ಲಾಭದಾಯ ಬೆಳೆಯಾಗಿದೆ.

ಅರ್ಥ ಎಕರೆಯಲ್ಲಿ ನೆಡಲಾದ ವೆಲ್‌ವೇಟ್ ಹೂವಿನ ಗಿಡಗಳು ಈಗ ಒಂದು ಗಿಡಕ್ಕೆ ನಾಲ್ಕೈದು ಕೆ.ಜಿ ಹೂಗಳನ್ನು ಬಿಡುತ್ತಿವೆ. ಈಗಾಗಲೇ ವಾರಕ್ಕೆ ಸುಮಾರು ೨೦ ರಿಂದ ೩೦ ಮಾರುಗಳಷ್ಟು ಚಿತ್ರದುರ್ಗ, ಚಳ್ಳಕೆರೆ ಮಾರುಕಟ್ಟೆಯಲ್ಲಿ ೫೦ ರಿಂದ ೭೦ ರೂಪಾಯಿಯ ವರೆಗೂ ಮಾರಾಟವಾಗಿವೆ. ಬೇಕಾಬಿಟ್ಟಿಯಾಗಿ ನೆಟ್ಟ ಗಿಡಗಳು ಇಂದು ವಾರಕ್ಕೆ ೨೦೦೦ ರೂ ಲಾಭದಾಯಕವಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭವಿದೆ ಎಂದು ನುಡಿಯುತ್ತಾರೆ ಪಾಲಯ್ಯನ ಮಗಳು ಪಾಲಮ್ಮ.

ಲಾಭದಾಯ ಹೇಗೆ :- ಈ ವೆಲ್‌ವೇಟ್ ಗಿಡವು ಒಮ್ಮೆ ನಾಡಿ ಮಾಡಿದರೆ ಸಾಕು ತಮ್ಮ ಅದೇ ಬೀಜಗಳನ್ನು ಬೀಳಿಸಿ ಗಿಡವಾಗುತ್ತದೆ. ಹೂವಿನ ಕೆಳ ಭಾಗದಲ್ಲಿ ಬೀಜಗಳು ಸಾವಿರಾರು ಇರುತ್ತವೆ. ಹೂ ಬಿಡಿಸುವಾಗ ಕೆಳಗೆ ಬಿದ್ದು ಮತ್ತೇ ಬೆಳೆದುಕೊಂಡು ಹೂ ಬಿಡಲಾರಂಭಿಸುತ್ತವೆ. ಹೀಗಾಗಿ ಯಾವುದೇ ಖರ್ಚು ಇಲ್ಲದ ಬೆಳೆಯಾಗಿದೆ.

ನೋಡಲು ಅಂದ ಹೂ:- ವೆಲ್‌ವೇಟ್ ಪ್ಲವರ್ ನೋಡುಗರನ್ನು ಸೆಳೆಯುವ ಹೂಗಳಾಗಿವೆ. ಕೆಂಪು ವರ್ಣದ ಈ ಹೂವನ್ನು ಸುಗಂಧರಾಜ್ ಹೂವಿನ ಹಾರ, ಮಾರುಗಟ್ಟಲೇ ಕಟ್ಟಿ ಮಾರಾಟ ಮಾಡುತ್ತಾರೆ. ಅಂದಕ್ಕೆ ಮತ್ತೊಂದು ಹೆಸರು ಎಂಬುವುದು ಸತ್ಯ. ರೈತರ ಸಂಪರ್ಕಕ್ಕೆ 8861285619(ಬೋರೇಶ್ ಪಾಲಯ್ಯನ ಮೊಮ್ಮಗ)