ಬೆಂಗಳೂರು: ಅರೆ ಇದೇನಪ್ಪ ರಾಜ್ಯ ಸರ್ಕಾರಕ್ಕೆ ಜಾನುವಾರುಗಳ ಮೇಲೆ ಿಷ್ಟೊಂದು ಪ್ರೀತಿ ಹೆಚ್ಚಾಗಿದೆ ಅಂತ ಹುಬ್ಬೇರಿಸುವ ಅಗತ್ಯವಿಲ್ಲ.  ಬೇಸಿಗೆ ಸಮಯದಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆ ನಡುವೆ ಹೊಲದಲ್ಲಿ ದುಡಿಸಿಕೊಳ್ಳುವಂತಿಲ್ಲ ಸರಕಾರ ಆದೇಶಿಸಿದೆ.

ಜನರಿಗಷ್ಟೇ ಬೇಸಿಗೆ ಬಿಸಿಲು ತಟ್ಟುವುದಿಲ್ಲ. ಎತ್ತುಗಳೂ ಇದರ ಪರಿಣಾಮ ಎದುರಿಸುತ್ತವೆ. ಆ ಸಮಯದಲ್ಲಿ ದುಡಿಯುವುದು ಕಷ್ಟಕರ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ರೈತರು, ಉಳುಮೆಗೆ ಎತ್ತುಗಳನ್ನು ಬಳಸಿಕೊಳ್ಳುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ಕ್ರಮ ಕೊಳ್ಳಲಾಗುವುದು ಎಂದು ಒಳಾಡಳಿತ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಚ್ಚರಿಸಿದೆ.

ಈ ಗಾಗಲೇ ಆಯಾ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಮೂಲಕ ಈ ನಿಮಯ ಜಾರಿ ಮಾಡಲಾಗುತ್ತಿದೆ ಎಂದು. ತಿಳಿದ ಬಂದಿದೆ