ಚಳ್ಳಕೆರೆ: ಪೂರ್ವಜನರು ನಡೆಸಿಕೊಂಡು ಕೊಂಡು ಬಂದ ಕೃಷಿ ಚಟುವಟಿಕೆ ಹಾಗೂ ಕೊಟ್ಟಿಗೆ ಗೊಬ್ಬರಗಳ ಮರೆತು ಕುಲಾಂತರಿ ತಳಿಗಳ  ಮಾರು ಹೋಗಿ  ರಾಸಾಯನಿಕ ಗೊಬ್ಬರ  ಹಾಗೂ ಕೀಟನಾಷಕ ಔಷಧಿಗಳ ಸಿಂಪರಣೆಯಿಂದ  ಭೂಮಿಯ ಜೈವಿಕ ಶಕ್ತಿ ನಾಶವಾಗಿ, ಭೂಮಿ ಬರಡಾಗಿದೆ ಎಂದು ಅಧ್ಯಕ್ಷ ಕನ್ನಡ ಪ್ರದಿಕಾರ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ರೋಟರಿ ಕ್ಲಬ್‌ನಲ್ಲಿ ಬಯಲು ಸೀಮೆ ಬರಹಗಾರರ ವೇದಿಕೆ(ರಿ) ಹಾಗೂ  ರೋಟರಿ ಕ್ಲಬ್, ಇವರ ಸಂಯುಕ್ತಾರ್ಶರಯಲದಲಿ ’ಚಳ್ಳಕೆರೆ-ಮೊಳಕಾಲ್ಮೂರು ತಾಲೂಕುಗಳಿಗೆ ನೀರಾವರಿ ಸಾಧ್ಯತೆಗಳು’ ಕುರಿತು ವಿಚಾರ ಸಂಕೀರಣ ಹಾಗು ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೂರ್ವಜನರು ಮಳೆ ಬಂದ ನೀರನ್ನು ಸಂರಕ್ಷಣೆ ಮಾಡಲು ಕೆರೆ, ಗುಂಟೆ, ಕಟ್ಟೆಗಳನ್ನು ನಿರ್ಮಿಸಿ ನೀರು ಹಿಂಗಿಸಿ ಅಂತರ್ಜಲ ಮಟ್ಟ ಕಾಪಾಡಿಕೊಳ್ಳುತ್ತಿದ್ದರು. ಆಧುನಿಕ ಯುಗದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೆರೆ, ಕಾಲುವೆಗಳ ಒತ್ತುವರಿ ಹಾಗು ಅವುಗಳ ನಿರ್ವಹಣೆಯಿಲ್ಲದೆ ಅವುಗಳ ಕಣ್ಮರೆಯಾಗುತ್ತಿದ್ದು. ನಿಸರ್ಗದಲ್ಲಿರುವ ಸಂಪತ್ತನ್ನು ಲೂಟಿ ಮಾಡುತ್ತಿರುವುದರಿಂದ ಸಕಾಲಕ್ಕೆ ಮಳೆ ಯಾಗುತ್ತಿಲ್ಲ ಎಲ್ಲಿ ಭೂಮಿ ತಂಪಾಗಿರುತ್ತದೆ ಅಲ್ಲಿ ಮೋಡಗಳ ಅಕರ್ಷಣೆಯಿಂದ ಮಳೆ ಬೀಳುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕುಲಾಂತರಿ ತಳಿಯ ವಾಣಿಜ್ಯ ಬೆಳೆಗಳನ್ನು ಖಾಸಗಿ ಕಂಪನಿಗಳು ರೈತರಿಗೆ ಪರಿಚಯ ಮಾಡಿರುವುದರಿಂದ ಬೆಳೆಗಳ ರಕ್ಷಣೆಗಾಗಿ ಸಾವಯವಗೊಬ್ಬರ ಹಾಗೂ ಕ್ರೀಮಿನಾಷಕ ಔಷಧಿಗಳ ಸಿಂಪರಣೆಯಿಂದ ಭೂಮಿಯಲ್ಲಿರುವ ಎರೆಹುಳುಗಳು ನಾಶವಾಗಿ, ಭೂಮಿಯ ಫಲವತ್ತತೆಯನ್ನು ಕಳೆದುಕೊಂಡು ಭೂಮಿ ಬರಡಾಗುವ ಜತೆಗೆ ಗಾಳಿಯಲ್ಲಿ ಔಷಧಿ ಸೇರಿಕೊಂಡು ಮಾನವನ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರಿ ಹುಟ್ಟುವ ಮಕ್ಕಳ ಅಂಗವಿಕಲರಾಗಿ, ಮಹಿಳೆಯರು ಬಂಜೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೃಷಿ ತಜ್ಞರು ಸಾವಯ ಕೃಷಿ  ಪದ್ದತಿಯನ್ನು ಅಳವಡಿಕೊಳ್ಳುವಂತೆ ಬೊಬ್ಬೆಯಿಟ್ಟರು ರಸಗೊಬ್ಬರ ಹಾಗೂ ಕ್ರಿಮಿನಾಷಕ ಔಷಧಿ ಬಳಕೆಯಿಲ್ಲದೆ ಏನನ್ನು ಬೆಳೆಯಲು ಸಾಧ್ಯವಿಲ್ಲ ಎಂಬ ಮಾತು ರೈತರಲ್ಲಿ ಮನೆ ಮಾಡಿದೆ ಎಂದರು.
ಶಾಸಕ ಟಿ.ರಘೂಮೂರ್ತಿ ಮಾತನಾಡಿ ತಾಲೂಕಿನಲ್ಲಿ ಸತತ ಬರಗಾಲಕ್ಕೆ ತುತ್ತಾಗುವುದರಿಂದ ಸಕಾಲಕ್ಕೆ ಮಳೆ ಬಾರದೆ ಅಂತರ್ಜಲ ಮಟ್ಟ ಕುಸಿದಿದ್ದು. ಕೆರೆ, ಕಟ್ಟೆ, ನದಿಗಳು ಬತ್ತಿಹೋಗಿವೆ ಆದ್ದರಿಂದ ಮಳೆ ಬಂದ ನೀರು ವ್ಯರ್ಥವಾಗದೆ ವೇದಾವತಿ ನದಿಯಲ್ಲಿ ಮೂರು ಕಡೆ ದೊಡ್ಡ ದೊಡ್ಡ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲು ಈಗಾಗಲೆ ಸರಕಾರದಿಂದ ಹಣ ಮಂಜುರಾತಿಯಾಗಿದ್ದು ಅತಿ ಜರೂರು ಕಾಮಗಾರಿ ಪ್ರಾರಂಭಿಸಲಾಗುವುದು. ಇದರಿಂದ ಸುತ್ತಮುತ್ತಲ ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆಯಾಗಿ ಪ್ರಾಣಿ, ಪಕ್ಷಿ ಹಾಗೂ ಜನಗಳಿಗೆ ಕುಡಿಯುವ ನೀರಿಗೆ ಸಹಕಾರಿಯಾಗಲಿದೆ. ಸಿಡ್ಲಯ್ಯನಕೋಟೆ ಯಿಂದ ರಾಣೀಕರೆಗೆ ಹೋಗುವ ಕಾಲುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಇದರಿಂದ ಗೋಸಿಕೆರೆ, ಟಿ,ಎನ್,ಕೋಟೆ, ಪರಶುರಾಂಪುರ ಹಾಗೂ ರಾಣೀಕರೆಗೆ ನೀರು ಸರಾಗವಾಗಿ ಹರಿದು ಕೆರೆಗಳು ಬರ್ತಿಯಾಗಲಿವೆ ಹಾಗೂ ಶಾಶ್ವತ ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಭದ್ರಾಮೇಲ್ದಂಡೆಯೋಜೆನೆ ಹಾಗೂ ಮೊಳಕಾಲ್ಮೂರು ಪಾವಗಡೆ, ಚಳ್ಳಕೆರೆ ತಾಲೂಕಿನ ಜನತೆಗೆ ಕುಡಿಯುವ ನೀರಿಗಾಗಿ ತುಂಗಾಭದ್ರ ಜಲಾಶಯ ನೀರು ಸರಬರಾಜು ಕಾಮಗಾರಿಗೆ ಸರಕಾರ ಹಣ ಬಿಡುಗಡೆ ಗೊಳಿಸಿದೆ ಈ ಎರಡು ಯೋಜನಗೆಗಳಿಂದ ರೈತರು ಹಾಗರೀಕರೆಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಾಹಿತಿ ಮರಿಕುಂಟೆ ತಿಪ್ಪಣ್ಣ ಮಾತನಾಡಿ ತಾಲೂಕಿನಲ್ಲಿ ಸತತ ಬರಗಾಲಕ್ಕೆ ತುತ್ತಾದರೂ ಸಾಹಿತ್ಯ ಕೃಷಿಗೆ ಬರಗಾಲವಿಲ್ಲ ಆದ್ದರಿಂದ ಯುವ ಕವಿಗಳು, ಸಾಹಿತಿಗಳು ನಿಮ್ಮ ಬರಹದಿಂದ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಬೇಕು ಬೇಡಗಳ ಬಗ್ಗೆ ಎಚ್ಚರಿಸುವಂತಹ ಸಾಹಿತ್ಯ ಬರಹಗಳನ್ನು ಬರೆಯುವಂತೆ ತಿಳಿಸಿದರು.
ರೈತ ಮುಂಡರಾದ ಸೋಮಗುದ್ದು ರಂಗಸ್ವಾಮಿ, ಪತ್ರಕರ್ತ  ನರೇನಹಳ್ಳಿ ಅರುಣಕುಮಾರು, ಪ್ರಜಾಶಕ್ತಿ ಬೋರಯ್ಯ,ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,ಸಾಹಿತಿಗಳಾದ ಟಿ.ಜೆ.ತಿಪ್ಪೇಸ್ವಾಮಿ, ಪರಮೇಶ್ವರಪ್ಪ ಕುದುರಿ, ಬಯಲು ಸೀಮೆ ಬರಹಗಾರರವೇಧಿಕೆ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿದರು.
ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ, ರೈತ  ಮುಖಂಡರಾದ ಕೆ.ಪಿ.ಭೂತಯ್ಯ, ಭೀಮಾರೆಡ್ಡಿ, ಸಾಹಿತಿ ಮಾಲತೇ ಅರಸು, ಇತರರು ಪಾಲ್ಗೊಂಡಿದ್ದರು.
ಕವಿಗೋಷ್ಠಿ;  ಬಯಲು ಸೀಮೆ ಬರಹರಾರರ ವೇದಿಕೆಯಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕವಿಗೋಷ್ಠಿಯ ಉದ್ಘಾಟನೆಯನ್ನು ಸಾಹಿತಿ ತಿಪ್ಪಣ್ಣ ಮರಿಕುಂಟೆ ವಹಿಸಿದ್ದರು.  ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ವಹಿಸಿದ್ದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳಾದ ಕೆ.ಎಂ.ಪರಮೇಶ್ವರಪ್ಪ, ಡಿ.ಬಿ.ನಾಂiiಕ್, ಟಿ.ಜೆ.ತಿಪ್ಪೇಸ್ವಾಮಿ, ಕಿರಣ್ ಮೀರಜ್‌ಕರ್, ಎಸ್.ಆರ್.ರಂಗಸ್ವಾಮಿ, ಹೆಚ್.ಶಿವಮೂರ್ತಿ, ಮಾಲತೇಶ್ ಅರಸ್ಸು, ಗುರುಸ್ವಾಮಿ, ಬೆಲಗೂರು ಜಯಶೀಲ ಲಾಡ್, ಹಾಗೂ ಆರ್.ಟಿ.ಸ್ವಾಮಿ ಇವರುಗಳನ್ನು ಅತ್ಯುತ್ತಮ ಕವಿಗಳೆಂದು ತೀರ್ಪುಗಾರರು (ಟಾಪ್-೧೦)  ಆಯ್ಕೆ ಮಾಡಿದರು.